ಉತ್ನಳ್ಳಿ ಮಾರಮ್ಮನ ಜನಪದ ಹಾಡು/Utnalli Māramma’s folksong


ಜಾನಪದ ಹಾಡಿನ ವಿಶ್ಲೇಷಣೆ (ಕನ್ನಡ ಹಾಗು ಆಂಗ್ಲ)

An analysis of the folksong (Both English & Kannada)

ಉತ್ನಳ್ಳಿ ಮಾರಮ್ಮನ ಜನಪದ ಹಾಡು

ಉತ್ನಳ್ಳಿ ಮಾರಮ್ಮನ ಹಾಡು

ತಂದಾನಾ ತಾನಾನಾ ತಂದನಾನ ತಾನಾನಾ
ತಂದನ್ನ ತಂದನ ತಾನ
ತಂದನಾನ ತಾನಾನಾ ಆ

ನಿನ್ನ ಭಾವನಾದ ನಂಜುಂಡೇಶ್ವರನು
ಹೋಗಿ ಮೂರು ತಿಂಗಳಾಯ್ತಲ್ಲವ್ವಾ
ಅವನೂ ಹೋದಾಗಿನಿಂದ ನನ್ನ ಜನುಮಕ್ಕೆ ಅನ್ನ ನೀರು ನಿದ್ದೆ ಒಂದೂ ಸೇರಿಲ್ಲ
ನೆತ್ತಿ ಮ್ಯಾಲೆ ನೆರೆ ಬಂದಂತಾ ಮುದಿ ನನ್ನ ಸವತಿಗೆ ಒಲಿಕೊಂಡು ಕುಳಿತಾನಲ್ಲವ್ವಾ
ತಂದಾನಾನಾ ತಾನಾನಾ

ಹಾವ್ನಾದ್ರೂ ಕಚ್ಚಬಾರದಾ
ಅವ್ನ್ಗೆ ಚೇಳಾದ್ರೂ ಚುಚ್ಚಬಾರದಾ
ಹೊಟ್ಟೀಗೆ ನೋವ್ ಬಂದೂ ಕಟ್ಟೀಗೆ ಹಿಡಿಯಬಾರದಾ
ನಾಕಾರು ಜ್ವರ ಬಂದು ನರಳಾಡಿ ಸಾಯಬಾರದಾ
ಕಳ್ಳಾ ಅವ್ನ್ ಸಾಯಾ
ಕೂಡಿಯೇ ಬರಲಿಲ್ಲ ತಂಗ್ಯವ್ವಾ…
ತಂದಾನಾನಾ ತಾನಾನಾ

ತಂಗಿ ಉತ್ನಳ್ಳಿ ಮಾರಿ
ನಂಜನ ಗೂಡಿಗೆ ಹೋಗಿ
ಭಾವುನ್ಸೆ ಕರೆದೂ ಬಾರೇ
ಭಾವ ನಂಜುಂಡೇಶನಾ

ನಿಸ್ಸಾತ್ರಿ ಜಾಮವಂತೆ
ಮುಳ್ಳೂರು ಗುಡ್ಡದ ಮೇಲೆ
ಮುಳ್ಳೂರು ಗುಡ್ಡಿಯಂತೆ ಕೂತ್ಕೊಂಡು
ಯಾವ ರೀತಿ ಅತೀ ಪ್ರೀತಿಯಿಂದಾ ತನ್ನ ಭಾವನನ್ನು ಕರೆಯುತ್ತಾಳೆಂದರೆ

ಭಾವ ಮಾತನ್ನಾಡಯ್ಯಾ ಶಂಭೂ
ಮಾತಿಗೆ ಮರುಳಾದೆ
ಪ್ರೀತಿಯುಳ್ಳರಸ ಮಾತನ್ನಾಡೋ
ಎದ್ದು ಬೀದಿಗೆ ಬಾರೋ
ಮುದ್ದುಳ ಮುಖವಾ ತೋರೋ
ಚಂದಕೆ ಮಾತನ್ನಾಡೋ
ಅಂದಕೆ ಬೀದಿಗೆ ಬಾರೋ

ಸ್ವಾಮೀ ಚಂದ್ರಸೇಕರ ನಂಜುಂಡೇಶ
ಮನಸ್ಸಿಲ್ಲವಯ್ಯಾ ನಿನ್ನ ಮಡದಿ ಮ್ಯಾಗೆ
ಮನಸ್ಸಿಲ್ಲವಯ್ಯಾ ನಿನ್ನ ಮಡದಿ ಮ್ಯಾಗೆ

ನಡುರಾತ್ರಿ ನಂಜುಂಡೇಶ್ವರನನ್ನು ಉತ್ನಳ್ಳಿ ಮಾರಮ್ಮನವರು
ಕೂಗೋದು ಮೂರು ಮಾತು ಕೂಗಿ ಕರೆಯೋದು ಮೂರು ಮಾತು ಕರೆದು
ಹಿಂತಿರುಗಿ ಬರುವಳೇ ರಂಭೇ ಉತ್ನಳ್ಳೀ ಮಾರಿ
ಹಿಂತಿರುಗಿ ಬರುವಳೇ ರಂಭೇ ಉತ್ನಳ್ಳೀ ಮಾರಿ

ತಂದಾನಾ ತಾನಾನಾ ತಂದನಾನ ತಾನಾನಾ
ತಂದನ್ನ ತಂದನ ತಾನ ತಂದನಾನ ತಾನಾನಾ ಆ

ಜನಪದ ಗೀತೆಯ ವ್ಯಾಖ್ಯಾನ

ಹಿನ್ನಲೆ

ವಿಕಿಪೀಡಿಯಾ ಮೂಲದ, ಜನಪ್ರಿಯ ದಂತಕಥೆಯ ಪ್ರಕಾರ ಮೈಸೂರು (ಮಹಿಷೂರು/ಮಹಿಶೂರು) ತನ್ನ ಹೆಸರನ್ನು ಮಹಿಷಾಸುರಮರ್ದಿನಿಯಿಂದ ಪಡೆದುಕೊಂಡಿದೆ, ಇದು ದುರ್ಗಾ ದೇವಿಯ (ಚಾಮುಂಡೇಶ್ವರಿ) ಅಭಿವ್ಯಕ್ತಿಯಾಗಿದೆ. ಎಮ್ಮೆ/ ಕೋಣನ ರೂಪದ ರಾಕ್ಷಸ ಮಹಿಷಾಸುರ ಸ್ಥಳೀಯ ಜನರನ್ನು ಭಯಭೀತಗೊಳಿಸಿದ್ದ  ಸಮಯದಲ್ಲಿ ಚಾಮುಂಡಿ ಬೆಟ್ಟದ ಮೇಲೆ ಚಾಮುಂಡೇಶ್ವರಿ ದೇವಿಯು ಮಹಿಷಾಸುರನನ್ನು ಕೊಂದಳು ಎಂದು ಪ್ರಾದೇಶಿಕವಾಗಿ  ನಂಬಲಾಗಿದೆ. ಈ ಸ್ಥಳದಲ್ಲಿ ಮೈಸೂರಿನ ಚಾಮುಂಡೇಶ್ವರಿ ದೇವಸ್ಥಾನ ನಿರ್ಮಿಸಲಾಗಿದೆ. ವಾರ್ಷಿಕವಾಗಿ ನವರಾತ್ರಿ ಮತ್ತು ಮೈಸೂರು ದಸರಾದಲ್ಲಿ ಸಮಾರಂಭಗಳನ್ನು ಆಚರಿಸಲಾಗುತ್ತದೆ. ಭಾರತದಲ್ಲಿ ಬ್ರಿಟಿಷ್ ಯುಗವು “ಮಹಿಶೂರು” ಎಂಬ ಹೆಸರನ್ನು “ಮೈಸೋರ” ಎಂದು ಬದಲಾಯಿಸಿತು ಮತ್ತು ನಂತರ “ಮೈಸೂರು” ಆಗಿ ಕನ್ನಡೀಕರಣಗೊಂಡಿತು.

ನಗರದ ರಕ್ಷಕ ದೇವತೆಯಾದ ಚಾಮುಂಡೇಶ್ವರಿಯ ದೇವಾಲಯವು ನಗರಕ್ಕೆ ಅಭಿಮುಖವಾಗಿರುವ ಬೆಟ್ಟದ ಮೇಲೆ ಮಹಿಷಾಸುರನ ದೈತ್ಯ ಪ್ರತಿಮೆಯನ್ನು ಹೊಂದಿದೆ. ದಾಖಲಾದ ಇತಿಹಾಸದಲ್ಲಿ ಮೈಸೂರಿನ ಆರಂಭಿಕ ಉಲ್ಲೇಖವನ್ನು 245 BC ಯಲ್ಲಿ ಗುರುತಿಸಬಹುದು, ಅಂದರೆ, ಅಶೋಕನ ಅವಧಿಯ ಮೂರನೇ ಬೌದ್ಧ ಸಮ್ಮೇಳನದ ಕೊನೆಯಲ್ಲಿ, ಮಹಿಷ ಮಂಡಲಕ್ಕೆ ತಂಡವನ್ನು ಕಳುಹಿಸಲಾಗಿತ್ತು.

ಜ್ವಾಲಾಮುಖಿ ತ್ರಿಪುರಸುಂದರಿ ದೇವಸ್ಥಾನವು ಮೈಸೂರಿನಿಂದ ನಂಜನಗೂಡಿಗೆ ಹೋಗುವ ಹೆದ್ದಾರಿಯಲ್ಲಿ ಸುಮಾರು ಐದು ಕಿ.ಮೀ. ಉತ್ತನಹಳ್ಳಿ ಹಳ್ಳಿಯ ಚೌಕದ ಮಧ್ಯದಲ್ಲಿರುವ ಬೆಟ್ಟದ ಮೇಲೆ ನೆಲೆಗೊಂಡಿದೆ. ಈ ದೇವಾಲಯ ಮತ್ತು ಗ್ರಾಮವು ಮೈಸೂರಿನ ಚಾಮುಂಡಿ ಬೆಟ್ಟದ ತಳಭಾಗದಲ್ಲಿದ್ದು, ಬೆಟ್ಟದ ಮೇಲಿರುವ ಚಾಮುಂಡೇಶ್ವರಿ ದೇವಸ್ಥಾನದಿಂದ 3 ಕಿಮೀ ದೂರದಲ್ಲಿದೆ. ಉತ್ತನ ಎಂಬ ಸ್ಥಳ/ಪ್ರದೇಶ ಆ ಕಡೆ ದೂರವೂ ಇಲ್ಲ ಅಥವಾ ತುಂಬಾ ಹತ್ತಿರವೂ ಇಲ್ಲ; (ಅಕ್ಷರಶಃ, ಅವುಗಳ ನಡುವೆ ‘ಅಲ್ಲಿ’ ಮತ್ತು ‘ಇಲ್ಲಿ’) ಎಂದು ಉಲ್ಲೇಖಿಸಬಹುದು. ಉತ್ತನಹಳ್ಳಿಯು ನಂಜನಗೂಡು – ಅಲ್ಲಿ ಮತ್ತು ಚಾಮುಂಡಿ ಬೆಟ್ಟ – ಇಲ್ಲಿ ಒಂದು ಸ್ಥಳವಾಗಿದೆ.

ಸ್ಥಳೀಯವಾಗಿ ಮಾರಮ್ಮ ಎಂದು ಕರೆಯಲ್ಪಡುವ ಜ್ವಾಲಾಮುಖಿ ತ್ರಿಪುರಸುಂದರಿ ಚಾಮುಂಡೇಶ್ವರಿಯ ಸಹೋದರಿ ಎಂದು ನಂಬಲಾಗಿದೆ.

ಚಾಮುಂಡಿ ಮಹಿಷಾಸುರ(ರಕ್ತ ಬೀಜಾಸುರ)ನನ್ನು ಸಂಹಾರ ಮಾಡುವಾಗ ಆತನ ರಕ್ತ ಬಿದ್ದ ಕಡೆಯಲ್ಲ ರಾಕ್ಷಸರು ಜನಿಸುತ್ತಿರುತ್ತಾರೆ. ರಾಕ್ಷಸರ ಕಾದಾಟದಲ್ಲಿ ಚಾಮುಂಡಿಯ ಬೆವರಿನಿಂದ ಉದ್ಭವಿಸುವವಳೇ (ಜ್ವಾಲಾಮುಖಿ ತ್ರಿಪುರ ಸುಂದರಿ ದೇವಿ) ಉತ್ತನಹಳ್ಳಿ ಮಾರಮ್ಮ. ಹೀಗೆ ಜನಿಸಿದ ಉತ್ತನಹಳ್ಳಿ ಮಾರಮ್ಮ ‘ಅಕ್ಕ ನೀನು ರಾಕ್ಷಸರೊಡನೆ ಯುದ್ಧ ಮಾಡು, ರಕ್ತ ಬೀಜಾಸುರನ ರಕ್ತ ನೆಲಕ್ಕೆ ತಾಕದಂತೆ ನಾಲಗೆ ಹಾಸಿಕೊಳ್ಳುತ್ತೇನೆ,’ ಎಂದು ನಾಲಿಗೆ ಹಾಸಿಕೊಂಡು ಮಹಿಷನ ಸಂಹಾರಕ್ಕೆ ಸಹಕರಿಸುತ್ತಾಳೆ. ಇದರಿಂದ ಮಹಿಷಸಂಹಾರ ಯಶಸ್ವಿಯಾಗುತ್ತದೆ. ತಂಗಿಯ ಸಾಹಸಕ್ಕೆ ಮೆಚ್ಚಿ ಚಾಮುಂಡಿ, ಬೆಟ್ಟದ ಹಿಂಭಾಗದಲ್ಲಿ ಮಾರಮ್ಮನನ್ನು ನೆಲಗೊಳ್ಳಲು ಸೂಚಿಸಿ ನನಗೆ ಬರುವ ಭಕ್ತರು ನಿನಗೂ ಪೂಜೆ ಸಲ್ಲಿಸಲಿ ಎಂದು ಆರ್ಶೀವಾದಿಸಿದಳು ಎಂಬ ಪ್ರತೀತಿ ಇದೆ.

ಸ್ಥಳ

ಉತ್ತನಹಳ್ಳಿ, ಚಾಮುಂಡಿ ಬೆಟ್ಟ, ಮುಳ್ಳೂರು ಮತ್ತು ನಂಜನಗೂಡಿನ ಗೂಗಲ್‌ ನಕ್ಷೆ

ಈಗ ನಾವು ಗೂಗಲ್‌ನ ಮೈಸೂರಿನ ನಕ್ಷೆಯನ್ನು ಪರಿಶೀಲಿಸೋಣ, ಈ ಕಥೆ ಚಾಮುಂಡಿ ಬೆಟ್ಟ, ಉತ್ತನಹಳ್ಳಿ, ಕಬಿನಿ ನದಿಯ ದಂಡೆಯ ಮುಳ್ಳೂರು (~ದಿಕ್ಸೂಚಿ 12°08’05.3″N 76°43’07.0″E) ಮತ್ತು ನಂಜನಗೂಡಿನಲ್ಲಿ ನಡೆಯುತ್ತದೆ. ಮುಳ್ಳೂರು ಇಂದಿನ ಹೊರಳವಾಡಿ ಗ್ರಾಮಕ್ಕೆ ಹತ್ತಿರದಲ್ಲಿದೆ. ಕೆಲವೊಮ್ಮೆ ಮೌಖಿಕ ಸಂಪ್ರದಾಯದಲ್ಲಿ ಈ ಹಾಡಲ್ಲಿ ಮುಳ್ಳೂರನ್ನು ಮಳ್ಳೂರು/ಮರಲೂರು ಎಂದು ನಿರೂಪಿಸಲಾಗಿದೆ, ಅದು ಸೂಕ್ತವಲ್ಲ. ಚಾಮುಂಡಿ ಬೆಟ್ಟದ ದೇವಸ್ಥಾನದ (1) ಆಗ್ನೇಯ ದಿಕ್ಕಿನಲ್ಲಿ ಉತ್ತನಹಳ್ಳಿ ದೇವಸ್ಥಾನ (2) ~ 2.5 ಕಿ.ಮೀ. ದೂರದಲ್ಲಿದೆ. ಉತ್ತನಹಳ್ಳಿ ದೇವಸ್ಥಾನದ (2) ದಕ್ಷಿಣಕ್ಕೆ ~17 ಕಿ.ಮೀ. ದೂರದಲ್ಲಿ ಮುಳ್ಳೂರು (3) ಇದೆ. ಮುಳ್ಳೂರಿನ (3) ಪೂರ್ವಕ್ಕೆ 3.3 ಕಿ.ಮೀ.  ದೂರದಲ್ಲಿ ನಂಜನಗೂಡು ನಂಜುಂಡೇಶ್ವರ ದೇವಸ್ಥಾನ (4) ಇದೆ.

ದಿನಾಂಕ

ಚಾಮುಂಡಿ ಬೆಟ್ಟ ಮತ್ತು ನಂಜನಗೂಡಿನಲ್ಲಿ ಈಗಿನ ಸಂಸ್ಕೃತಿ ಜೀವಂತವಾಗಿರುವವರೆಗೂ ಈ ಹಾಡು ಜೀವಂತವಾಗಿ ಉಳಿಯುತ್ತದೆ. ಮಹಿಷಾಸುರನನ್ನು ಕೊಂದ 3-4 ತಿಂಗಳ ನಂತರದಿಂದಲೇ ಈ ಹಾಡು ಮಾನ್ಯವಾಗಿದೆ.

ವಿಶ್ಲೇಷಣೆ

ಚಾಮುಂಡೇಶ್ವರಿ ಪುರಸ್ಕಾರಗಳಿಂದ ದಯಪಾಲಿಸಲ್ಪಟ್ಟಿದ್ದಾಳೆ. ಅವಳು ಮಹಾದೇವ ನಂಜುಂಡೇಶ್ವರನ ಗುರುತಿಸಲ್ಪಟ್ಟ ಪತ್ನಿ ಆಗುತ್ತಾಳೆ. ಮೈಸೂರಿನ ಅರಸರಿಗೆ ಆಕೆ ಇಷ್ಟದೇವತೆಯಾಗುತ್ತಾಳೆ. ಹಿಂದಿನ ದಿನಗಳಲ್ಲಿ ಒಂಬತ್ತು ದಿನಗಳ ನವರಾತ್ರಿ ಆಚರಣೆಗಳಲ್ಲಿ ಮಾರಮ್ಮ ಪ್ರಾಣಿ ಬಲಿಯನ್ನು ಸ್ವೀಕರಿಸುತ್ತಿದ್ದಳು, ಈ ಪದ್ಧತಿಯನ್ನು ಈಗ ನಿಲ್ಲಿಸಲಾಗಿದೆ. ಆದಾಗ್ಯೂ, ದಸರಾ (ದಶಹರಾ) ಉತ್ಸವಗಳನ್ನು ಪ್ರತಿ ವರ್ಷ ಅಕ್ಟೋಬರ್‌ನಲ್ಲಿ ಇಂದಿಗೂ ಚಾಮುಂಡೇಶ್ವರಿ ಮತ್ತು ಮೈಸೂರು ಕೇಂದ್ರಬಿಂದುಗಳಾಗಿ ಕರ್ನಾಟಕದಾದ್ಯಂತ ವೈಭವದಿಂದ ಅದ್ದೂರಿಯಾಗಿ ಆಚರಿಸಲಾಗುತ್ತದೆ. ಶ್ರೀಜ್ವಾಲಾಮುಖಿ ತ್ರಿಪುರ ಸುಂದರಿ (ಉತ್ತನಹಳ್ಳಿ ಮಾರಮ್ಮ) ಜಾತ್ರೆ ಎಂದು ಜನಪ್ರಿಯವಾಗಿ ಕರೆಯಲ್ಪಡುವ ಮಾರಿ ಸಾರು ಉತ್ತನಹಳ್ಳಿ ಜಾತ್ರೆಯು ಪ್ರತಿ ಬಾರಿ ಫೆಬ್ರವರಿಯಲ್ಲಿ ಇಂದಿಗೂ ನಡೆಯುತ್ತದೆ.

ಇದು ಒಂದು ಸುಖಾಂತ್ಯದಂತೆ ತೋರುತ್ತದೆ ಅಲ್ಲವೆ? ಆದರೆ…

ಚಾಮುಂಡೇಶ್ವರಿ, ಪಾರ್ವತಿಯ ಭೀಕರ ಮತ್ತು ಘೋರ ರೂಪ, ಶಾಶ್ವತವಾಗಿ ಆದರ್ಶ ದೇವತೆಯಾಗಲು ಸಾಧ್ಯವಿಲ್ಲ. ಪಾರ್ವತಿಯನ್ನು ಗೌರವಿಸುವ ಮೌಲ್ಯಾರ್ಥಗಳು – ಹೆಣ್ಣಿಗೆ ಸ್ವಾಭಾವಿಕವಾಗಿರುವ ಕರುಣೆ, ಮಮತೆ, ಪ್ರೀತಿ, ತಾಯ್ತನ, …

ಚಾಮುಂಡೇಶ್ವರಿಯ ಗುಣಗಳು – ಅಸ್ವಾಭಾವಿಕ, ಗಂಡುಬೀರಿ ಹೆಣ್ಣು, ಭಯಂಕರ, ರಕ್ತಪಿಪಾಸು, ಹೋರಾಟಗಾರ್ತಿ.

ಈ ದೃಷ್ಟಿಯಿಂದ ಅವಲೋಕಿಸಿದರೆ ಪಾರ್ವತಿಯ ಮೂಲ ಸ್ವರೂಪಕ್ಕೂ ಚಾಮುಂಡೇಶ್ವರಿಯ ಅವತಾರಕ್ಕೂ ಅಜಗಜಾಂತರ. ಆದ್ದರಿಂದ ಶಿವ- ಪಾರ್ವತಿಯರ ಯಥಾಸ್ಥಿತಿಯನ್ನು ಪುನಃಸ್ಥಾಪಿಸುವುದು ಅವಶ್ಯಕ. ಅಂದರೆ, ಶಿವನು ಚಾಮುಂಡಿಯೊಂದಿಗೆ ಶಾಶ್ವತವಾಗಿ ಇರಲು ಸಾಧ್ಯವಿಲ್ಲ. ಅವನು ಪಾರ್ವತಿಯೊಂದಿಗೆ ಒಂದಾಗಿರುವ ತನ್ನ ಅರ್ಧ-ನಾರೀಶ್ವರ ರೂಪಕ್ಕೆ ಹಿಂತಿರುಗಬೇಕು. ಅವನು ನಂಜನಗೂಡಿಗೆ ಹಿಂತಿರುಗಬೇಕು. ಇದು ಅವನ ದೈವಸ್ವಭಾವಕ್ಕೆ ತಕ್ಕ ನಡವಳಿಕೆ, ಮತ್ತು ಅವನಿಗೆ ಬೇರೆ ಆಯ್ಕೆಗಳಿಲ್ಲ.

ಹೌದು, ಒಟ್ಟಾರೆಯಾಗಿ ಇದು ಸರಿಯಾದ ಅಂತ್ಯವೇ. ಆದರೆ ಆಪತ್ ರಕ್ಷಕಳಾದ ಚಾಮುಂಡೇಶ್ವರಿಯನ್ನು ನೀವು ಹೇಗೆ ನಡೆಸಿಕೊಳ್ಳುತ್ತಿದ್ದೀರಿ ಎಂಬುದನ್ನ ಅವಳ ದೃಷ್ಟಿಯಿಂದ ಯೋಚಿಸಿ. ಅವಳ ಸಹಾಯವಿಲ್ಲದೇ ಇದ್ದರೆ, ಒಂದು ವೇಳೆ ಮಹಿಷ ದೀರ್ಘಾವದಿ ಬದುಕಿದ್ದರೆ ಒಳ್ಳೆಯದು ಮತ್ತು ಕೆಟ್ಟದ್ದರ ಮಧ್ಯೆ ಇದ್ದ ಸಮತೋಲನವು ಸಂಪೂರ್ಣ ಅದಲು-ಬದಲಾಗುತ್ತಿತ್ತು. ವಾಸ್ತವವಾಗಿ, ತನ್ನ ವಿರುಧ್ದ ಯುಧ್ಧ ಮಾಡಲು ಬಂದ ಚಾಮುಂಡೇಶ್ವರಿಯನ್ನು ನೋಡಿ ಮಹಿಷನು ಆಕೆಗೆ ತನ್ನನ್ನು ಮದುವೆಯಾಗಲು ಮತ್ತು ತಾನು ವಶಪಡಿಸಿಕೊಂಡಿಸಿರುವ ಸ್ವರ್ಗದಲ್ಲಿ ಅತಿ ವೈಭವದಿಂದ ಜೀವನವನ್ನು ನಡೆಸಲು ಆಹ್ವಾನಿಸುತ್ತಾನೆ. ಆದರೆ ಅವಳು ಎಲ್ಲರ ಒಳಿತಿನ ದೃಷ್ಟಿಯಿಂದ ಅವನ ಪ್ರಸ್ತಾಪವನ್ನು ತಿರಸ್ಕರಿಸುತ್ತಾಳೆ ಮತ್ತು ಅವನೊಂದಿಗೆ ವೀರೋಚಿತವಾಗಿ ಹೋರಾಡಿ ಕೊಲ್ಲುತ್ತಾಳೆ. ತದನಂತರ ತನಗೆ ಉತ್ತಮ ಸ್ಥಾನಮಾನವನ್ನು ಕೋರುವ ಎಲ್ಲ ಹಕ್ಕನ್ನೂ ಅವಳು ಹೊಂದಿದ್ದಾಳೆ. ಚಾಮುಂಡಿ ಬೆಟ್ಟದ ಮೇಲಿನ ಏಕಾಂಗಿಯಾಗಿ ಕುಳಿತುಕೊಳ್ಳುವ ದೇವತೆಗಿಂತ ಉನ್ನತ ಬದುಕು, ಸ್ಥಾನ ಅವಳಿಗೆ ಸಲ್ಲಬಾರದೇ?

ಚಾಮುಂಡೇಶ್ವರಿಯು ತನ್ನ ತಂಗಿ ಮಾರಮ್ಮನಿಗೆ ಈ ವೇದನೆಯನ್ನು ವ್ಯಕ್ತಪಡಿಸುವುದರೊಂದಿಗೆ ನಮ್ಮ ಜಾನಪದ ಹಾಡು ಪ್ರಾರಂಭವಾಗುತ್ತದೆ. ಆಕೆಗೆ ಆಹಾರ/ನೀರು ಇಷ್ಟವಾಗುತ್ತಿಲ್ಲ, ನಿದ್ದೆ ಬರುವಂತಿಲ್ಲ. ಶಿವನು ತನ್ನ ಹಳೆಯ-ಪ್ರೀತಿಯ ಪಾರ್ವತಿಯ ಬಳಿಗೆ ಹಿಂದಿರುಗುವ ತರ್ಕವನ್ನು ಅವಳು ಒಪ್ಪಿಕೊಳ್ಳುವುದಿಲ್ಲ, ಪಾರ್ವತಿಯನ್ನು ಅವಳು ನೆರೆಗೂದಲಿನ ವಯಸ್ಸಾದ ಮುದುಕಿಗೆ ಹೋಲಿಸುತ್ತಾಳೆ.

ದುಃಖವನ್ನು ಸಹಿಸಲಾಗದೆ, ಚಾಮುಂಡೇಶ್ವರಿ ಭಾವುಕಳಾಗಿ ತನಗೆ ತೋಚಿದ ಎಲ್ಲಾ ರೀತಿಯಲ್ಲಿ ಶಿವನನ್ನು ಶಪಿಸುತ್ತಾಳೆ. ಅವನಿಗೆ ನೋವು/ದುರಾದೃಷ್ಟ/ಅನಾರೋಗ್ಯವನ್ನು ಬಯಸುತ್ತಾಳೆ. ತನ್ನ ಬಳಿಗೆ ಹಿಂತಿರುಗದಿದ್ದಕ್ಕಾಗಿ ಅವನು ಸಾಯಲೆಂದು ಕೂಡಾ ಅವಳು ಬಯಸುತ್ತಾಳೆ.

ನಂತರ ಅವಳು ಸಾಂತ್ವನಗೊಂಡು ಶಾಂತಳಾಗುತ್ತಾಳೆ ಮತ್ತು ಮಾರಮ್ಮನಿಗೆ ನಂಜನಗೂಡಿಗೆ ಭೇಟಿ ನೀಡುವಂತೆ ಬೇಡಿಕೊಳ್ಳುತ್ತಾಳೆ. ನಂಜುಂಡೇಶ್ವರನನ್ನು ಚಾಮುಂಡಿ ಜೊತೆ ಗೂಡಲು ಚಾಮುಂಡಿ ಬೆಟ್ಟಕ್ಕೆ ಹಿಂತಿರುಗುವಂತೆ ಕೇಳುತ್ತಾಳೆ. ಅವಳ ಹೆಮ್ಮೆ ಅಥವಾ ನಾಚಿಕೆ ಅಥವಾ ಬೇರೆ ಯಾವುದೋ ಶಿಷ್ಟಾಚಾರದ ಕಾರಣಕ್ಕಾಗಿ, ಅವಳು ಸ್ವತಃ ನಂಜುಂಡೇಶ್ವರನನ್ನು ಭೇಟಿ ಮಾಡಲು ಬಯಸುವುದಿಲ್ಲ.

ಮಾರಮ್ಮ ನಂಜನಗೂಡಿಗೆ ಭೇಟಿ ನೀಡಲು ಚಾಮುಂಡಿ ಕೇಳುತ್ತಾಳೆ. ಚಾಮುಂಡಿ ನಿಯೋಜಿಸಿದ ಈ ಕೆಲಸವನ್ನು ಪೂರೈಸಲು ತನ್ನ ರಥದ ಮೇಲೆ ಹಾರಿ ಹೊರಡಲು ನಿರ್ಧರಿಸುವ ಮೊದಲು ಮಾರಮ್ಮ ಕಣ್ರೆಪ್ಪೆ ಕೂಡಾ ಬಡಿಯುವುದಿಲ್ಲ.

ಇಲ್ಲಿ ಗಮನಿಸಬೇಕಾದ ಕೆಲವು ಸೂಕ್ಷ್ಮ ಅಂಶಗಳಿವೆ. ಚಾಮುಂಡಿಯಾಗಲೀ ಮಾರಮ್ಮನಾಗಲೀ ಈ ವಿಚಾರವನ್ನು ಎಲ್ಲರ ಮುಂದೆ ಮುಕ್ತವಾಗಿ ಚರ್ಚೆ ಮಾಡುವುದಿಲ್ಲ. ಕಥೆಯು ಒಂದು ಕರಾಳ ರಾತ್ರಿಯ ಮಧ್ಯದಲ್ಲಿ ನಡೆಯುತ್ತದೆ. ಅವರ ವಾದವನ್ನು ಸಮಾಜ ಬೆಂಬಲಿಸುವುದಿಲ್ಲ ಎಂದು ಅವರು ಭಾವಿಸಿದ್ದಾರೆಯೇ? ಅಥವಾ ಅತ್ಯಂತ ಪವಿತ್ರ ದೇವರುಗಳಿಗೆ ಸಂಬಂಧಿಸಿದ ವಿಷಯಗಳನ್ನು ರಹಸ್ಯವಾಗಿ ಇಡಬೇಕೆಂದು ಅವರು ಬಯಸುತ್ತಾರೆಯೇ? ಹಾಡಿನಲ್ಲಿ ಕರಾಳ ರಾತ್ರಿಯ ಮೇಲೆ ಒತ್ತು ನೀಡುವುದು ಹತಾಶ ಸ್ಥಿತಿ, ಚಾಮುಂಡಿಯನ್ನು ತ್ಯಜಿಸುವಲ್ಲಿನ ಸನ್ನಿವೇಶದಲ್ಲಿ ಚಾಮುಂಡಿ ಹಾಗೂ ಮಾರಮ್ಮನ ಅಸಹಾಯಕ ಪರಿಸ್ಥಿತಿ ಮತ್ತು ಇದನ್ನು ರಹಸ್ಯ ಮತ್ತು ಖಾಸಗಿ ವಿಷಯವಾಗಿ ಇಟ್ಟುಕೊಳ್ಳುವ ಅಗತ್ಯವನ್ನು ತೋರಿಸುತ್ತದೆ.

ಆ ಮಧ್ಯರಾತ್ರಿಯಲ್ಲಿ “ನೀರು ಮತ್ತು ಕಲ್ಲು ಕೂಡ ಕರಗುತ್ತದೆ”, ಮಾರಮ್ಮ ಕಬಿನಿ ನದಿಯ ದಡದಲ್ಲಿರುವ ಮುಳ್ಳೂರನ್ನು ತಲುಪುತ್ತಾಳೆ. ಪ್ರಾಯಶಃ, ನದಿಯು ಸ್ವಾಭಾವಿಕವಾದ ಗಡಿಯಾಗಿರಬಹುದು. ಆದ್ದರಿಂದ ಅದನ್ನು ಮಾರಮ್ಮನ ರಥವು ದಾಟುವುದಿಲ್ಲ. ಅಥವಾ ಬಹುಶಃ ಅವಳು ನಂಜನಗೂಡು ಪ್ರವೇಶಿಸಲು ಬಯಸುವುದಿಲ್ಲ, ಬಹುಶಃ ಶಿಷ್ಟಾಚಾರ ಅಥವಾ ನಿಯಮ ಅಡ್ಡಿಯಾಗಿರಬಹುದು. ಅಥವಾ ತನ್ನ ಬಿನ್ನಹವನ್ನು ಮುಳ್ಳೂರಿನ ಶಂಬುಲಿಂಗೇಶ್ವರನ ಮುಂದೆ ಮಂಡಿಸಿರಬಹುದು (ಇಂದು ಕೂಡಾ ಮುಳ್ಳೂರಿನ ಶಂಬುಲಿಂಗೇಶ್ವರನ ದೇವಸ್ಥಾನವನ್ನು ನೋಡಬಹುದು). ಅದೇನೇ ಕಾರಣವಿರಲಿ, ಮುಳ್ಳೂರಲ್ಲಿ ನಿಂತು ಅವಳು ಶಿವನಿಗೆ ಅತ್ಯುತ್ತಮವಾದ ಶೈಲಿಯಲ್ಲಿ ತನ್ನ ಭಾವಪೂರ್ವಕ ಬಿನ್ನಹವನ್ನು ಮಂಡಿಸುತ್ತಾಳೆ.

ಶಂಭು ಉತ್ತಮ ಸಂಭಾಷಣೆಯಿಂದ ಪ್ರಭಾವಿತನಾಗುತ್ತಾನೆ ಎಂಬುದು ಮಾರಮ್ಮನಿಗೆ ಅರಿವಿದೆ. ಶಿವನು ಪ್ರಜ್ಞಾವಂತ ಮತ್ತು ತನ್ನನ್ನು ಸರಿಯಾದ ಮಾರ್ಗದಲ್ಲಿ ಒಲಿಸಿಕೊಂಡ ಭಕ್ತರಿಗೆ ಸಮಂಜಸ ವರಗಳನ್ನು ಕೂಡಾ ಒದಗಿಸಿದ್ದಾನೆ. ಆದ್ದರಿಂದ, ಅವಳು ಅವನನ್ನು ಅಕ್ಕರೆಯಿಂದ ಮಾತನಾಡಲು ಪ್ರೇರೇಪಿಸುತ್ತಾಳೆ. ಅವಳು ಅವನನ್ನು ಪ್ರೀತಿಯಿಂದ ತುಂಬಿದ ರಾಜ ಎಂದು ಅಟ್ಟಕ್ಕೇರಿಸುತ್ತಾಳೆ, ಅವನ ಸುಂದರ ಮುಖವನ್ನು ತೋರಿಸಲು ಕೇಳುತ್ತಾಳೆ, ಅವನ ಮಾತಿನ ಚಂದ ಕೇಳಿಸಿಕೊಳ್ಳಲಾದರು ಮಾತನಾಡೆನ್ನುತ್ತಾಳೆ. ಅವನು ಬೀದಿಗೆ ಬಂದು ಆ ಬೀದಿಯ ಕಳೆಯನ್ನು, ಸೌಂದರ್ಯವನ್ನು ಹೆಚ್ಚಿಸಲು ಕೇಳಿಕೊಳ್ಳುತ್ತಾನೆ.

ಈ ಕೌಶಲ್ಯದಿಂದ ಕೂಡಿದ ತನ್ನ ಓಲೈಕೆಗೆ ಶಿವನು ಕಿವಿಗೊಡುವುದಿಲ್ಲ ಎಂಬುದನ್ನು ಮಾರಮ್ಮ ಅರಿತುಕೊಳ್ಳುತ್ತಾಳೆ.

ದುಃಖಕರವೆಂದರೆ, ಈಗಲೂ ಅವರನ್ನು ಅತ್ಯಂತ ಯುತವಾಗಿ ಸ್ವಾಮಿ ಎಂದು ಸಂಬೋಧಿಸುತ್ತಾ, ಚಂದ್ರಶೇಖರ ಮತ್ತು ನಂಜುಂಡೇಶ ಎಂಬ ಮುದ್ದಿನ ಹೆಸರುಗಳಿಂದ ಕರೆಯುತ್ತಾ, ನಿರಾಶೆಯಿಂದ “ಅವನ ಹೃದಯದಲ್ಲಿ ಹೆಂಡತಿ ಚಾಮುಂಡೇಶ್ವರಿಗೆ ಸ್ಥಾನವಿಲ್ಲ” ಎಂದು ಒತ್ತಿ ಹೇಳುತ್ತಾಳೆ. ಚಾಮುಂಡಿಯ ರೀತಿ ಶಾಪ ಹಾಕುವುದಿಲ್ಲ, ಇಬ್ಬರ ಪ್ರತಿಪಾದನೆಗಳ ನಡುವಿನ ಈ ವ್ಯತ್ಯಾಸವನ್ನು ಗಮನಿಸಿ.

ಹೀಗೆ, ರಂಭೆಯಂತೆ ಅತ್ಯಂತ ಸುಂದರಿಯಾದ ಉತ್ತನಹಳ್ಳಿ ಮಾರಮ್ಮ, ಆ ಮಧ್ಯರಾತ್ರಿಯಲ್ಲಿ ನಂಜುಂಡೇಶ್ವರನನ್ನು ಕರೆದು ಬೇಡಿಕೊಳ್ಳುತ್ತಾಳೆ ಮತ್ತು ವಿಫಲಳಾಗಿ (ಚಾಮುಂಡೇಶ್ವರಿಗೆ) ಹಿಂತಿರುಗುತ್ತಾಳೆ. ಇಲ್ಲಿ ಮಾರಮ್ಮ ನಿರ್ಲಿಪ್ತಳಾಗಿ ವರ್ತಿಸಿದಳೇ ಅಥವಾ ಘನತೆ, ಗಾಂಭೀರ್ಯ ಹಾಗೂ ವಿಚಾರಶೀಲತೆಯಿಂದ ವರ್ತಿಸಿದಳೇ? ಇವೆಲ್ಲವೂ ಇದ್ದು ಮಾರಮ್ಮನ ಪ್ರಬುದ್ಧತೆಯನ್ನು ಬಿಂಬಿಸಲೆಂದೇ ಹಾಡಿನಲ್ಲಿ ಈ ಎಲ್ಲಾ ಅಂಶಗಳನ್ನೂ ಸೇರಿಸಿರುವುದು.

ಚಾಮುಂಡೇಶ್ವರಿಯು ಹೊಟ್ಟೆಯ ಸಂಕಟವನ್ನು ಹೇಳಿಕೊಂಡ/ಹೇಳಲಾರದ ಕಥೆ ಇಲ್ಲಿಗೆ ಮುಗಿಯುತ್ತದೆ. ಚಾಮುಂಡೇಶ್ವರಿ ನಂಜುಂಡೇಶ ಮತ್ತೆ ಒಂದಾಗುವರೆ ಎಂಬ ಬಗ್ಗೆ ಸ್ಪಷ್ಟತೆ ಇಲ್ಲದಿದ್ದರೂ ಸಾಕಷ್ಟು ಸುಳಿವುಗಳನ್ನು ನೀಡಲಾಗಿದೆ.  ಯಾವುದೇ ತೀರ್ಪು ನೀಡದೆ ಸಂಪೂರ್ಣ ಪ್ರಸಂಗದ ಬಗ್ಗೆ ತಮ್ಮದೇ ಆದ ತೀರ್ಪನ್ನು, ಅಂತ್ಯವನ್ನು ಆಯ್ಕೆ ಮಾಡಲು ಕೇಳುಗರಿಗೇ ಬಿಟ್ಟು ಈ ಜಾನಪದ ಗೀತೆ ಪಲ್ಲವಿಯೊಂದಿಗೆ ಮುಗಿಯುತ್ತದೆ. ತಂದಾನ ತಾನಾನೋ…

Utnalli Māramma Folksong

Song in English-Kannada

Utnalli Māramma songಉತ್ನಳ್ಳಿ ಮಾರಮ್ಮನ ಹಾಡು
Tandānā tānānā tandanāna tānānā
Tandanna tandana tāna
tandanāna tānānā ā
ತಂದಾನಾ ತಾನಾನಾ ತಂದನಾನ ತಾನಾನಾ
ತಂದನ್ನ ತಂದನ ತಾನ
ತಂದನಾನ ತಾನಾನಾ ಆ
Hear Hear My Child
Utnalli Mārammā
Your brother-in-law NanjunDēshvara
Has gone for three months now
Since his departure My life is void of rice, water and sleep
He is in love and camped with his other old gray-haired wife
tandanāna tānānā
ಕೇಳು ಕೇಳು ನನ್ನ ಕಂದ
ಉತ್ನಳ್ಳಿ ಮಾರಮ್ಮಾ
ನಿನ್ನ ಭಾವನಾದ ನಂಜುಂಡೇಶ್ವರನು
ಹೋಗಿ ಮೂರು ತಿಂಗಳಾಯ್ತಲ್ಲವ್ವಾ
ಅವನೂ ಹೋದಾಗಿನಿಂದ ನನ್ನ ಜನುಮಕ್ಕೆ ಅನ್ನ ನೀರು ನಿದ್ದೆ ಒಂದೂ ಸೇರಿಲ್ಲ
ನೆತ್ತಿ ಮ್ಯಾಲೆ ನೆರೆ ಬಂದಂತಾ ಮುದಿ ನನ್ನ ಸವತಿಗೆ ಒಲಿಕೊಂಡು ಕುಳಿತಾನಲ್ಲವ್ವಾ
ತಂದಾನಾನಾ ತಾನಾನಾ
Why doesn’t snake bit him
Why doesn’t scorpion sting him
Why doesn’t he get stomach ache and get bed-ridden
Why doesn’t he awfully die from various fevers
Let that thief die
My young sister he did not come to meet
tandanāna tānānā
ಹಾವ್ನಾದ್ರೂ ಕಚ್ಚಬಾರದಾ
ಅವ್ನ್ಗೆ ಚೇಳಾದ್ರೂ ಚುಚ್ಚಬಾರದಾ
ಹೊಟ್ಟೀಗೆ ನೋವ್ ಬಂದೂ ಕಟ್ಟೀಗೆ ಹಿಡಿಯಬಾರದಾ
ನಾಕಾರು ಜ್ವರ ಬಂದು ನರಳಾಡಿ ಸಾಯಬಾರದಾ
ಕಳ್ಳಾ ಅವ್ನ್ ಸಾಯಾ
ಕೂಡಿಯೇ ಬರಲಿಲ್ಲ ತಂಗ್ಯವ್ವಾ…
ತಂದಾನಾನಾ ತಾನಾನಾ
young sister Utnalli Māri
go to Nanjana gooDu
call your brother-in-law
brother-in-law NanjunDēsha
ತಂಗಿ ಉತ್ನಳ್ಳಿ ಮಾರಿ
ನಂಜನ ಗೂಡಿಗೆ ಹೋಗಿ
ಭಾವುನ್ಸೆ ಕರೆದೂ ಬಾರೇ
ಭಾವ ನಂಜುಂಡೇಶನಾ
As wished by the elder,
the younger sister Māramma
instantly sets out in her chariot
It’s an insipid dark night
The time when stone and water melt
The hour of the deep dry night
On the mountain of muLLooru
Sitting like the mountain of muLLooru
She very lovingly calls out for her brother-in-law in this way
ಅಕ್ಕಾ ಹೇಳಿದ ಮಾತ
ಚಿಕ್ಕ ತಂಗಿಯು ಕೇಳಿ
ಜಕ್ಕಾನೆ ತೇಜಿಯನೇರಿ ಹೊರಟಾಳು ಮಾರಮ್ಮಾ
ಸಪ್ಪಟ್ಟು ಸರ್ರಾತ್ರಿಯಂತೆ
ಕಲ್ಲು ನೀರು ಕರಗೋ ವ್ಯಾಳೆಯಂತೆ
ನಿಸ್ಸಾತ್ರಿ ಜಾಮವಂತೆ
ಮುಳ್ಳೂರು ಗುಡ್ಡದ ಮೇಲೆ
ಮುಳ್ಳೂರು ಗುಡ್ಡಿಯಂತೆ ಕೂತ್ಕೊಂಡು
ಯಾವ ರೀತಿ ಅತೀ ಪ್ರೀತಿಯಿಂದಾ ತನ್ನ ಭಾವನನ್ನು ಕರೆಯುತ್ತಾಳೆಂದರೆ
Brother-in-law, speak respected Shambhoo
You got deceived by words
Speak Oh King full of love
Get up and come to the street
Show your darling face
Speak for goodness’ sake
Come dazzling on to the street
ಭಾವ ಮಾತನ್ನಾಡಯ್ಯಾ ಶಂಭೂ
ಮಾತಿಗೆ ಮರುಳಾದೆ
ಪ್ರೀತಿಯುಳ್ಳರಸ ಮಾತನ್ನಾಡೋ
ಎದ್ದು ಬೀದಿಗೆ ಬಾರೋ
ಮುದ್ದುಳ ಮುಖವಾ ತೋರೋ
ಚಂದಕೆ ಮಾತನ್ನಾಡೋ
ಅಂದಕೆ ಬೀದಿಗೆ ಬಾರೋ
Swamy Chandrasēkara nanjunDēsha
You don’t love your wife
You don’t love your wife
ಸ್ವಾಮೀ ಚಂದ್ರಸೇಕರ ನಂಜುಂಡೇಶ
ಮನಸ್ಸಿಲ್ಲವಯ್ಯಾ ನಿನ್ನ ಮಡದಿ ಮ್ಯಾಗೆ
ಮನಸ್ಸಿಲ್ಲವಯ್ಯಾ ನಿನ್ನ ಮಡದಿ ಮ್ಯಾಗೆ
Thus, in the midnight Utnalli Māramma addresses nanjunDēshvara
Invocates him using three words
Invites him using three words
And she returns Rambhe Utnalli Māri
And she returns Rambhe Utnalli Māri
ನಡುರಾತ್ರಿ ನಂಜುಂಡೇಶ್ವರನನ್ನು ಉತ್ನಳ್ಳಿ ಮಾರಮ್ಮನವರು
ಕೂಗೋದು ಮೂರು ಮಾತು ಕೂಗಿ ಕರೆಯೋದು ಮೂರು ಮಾತು ಕರೆದು
ಹಿಂತಿರುಗಿ ಬರುವಳೇ ರಂಭೇ ಉತ್ನಳ್ಳೀ ಮಾರಿ
ಹಿಂತಿರುಗಿ ಬರುವಳೇ ರಂಭೇ ಉತ್ನಳ್ಳೀ ಮಾರಿ
Tandānā tānānā tandanāna tānānā
Tandanna tandana tāna tandanāna tānānā ā
ತಂದಾನಾ ತಾನಾನಾ ತಂದನಾನ ತಾನಾನಾ
ತಂದನ್ನ ತಂದನ ತಾನ ತಂದನಾನ ತಾನಾನಾ ಆ
Song in English-Kannada

Commentary of the folksong

Background

According to Wikipedia, the popular legend is that Mysore (Mahishooru) gets its name from Mahishāsuramardini, a manifestation of Goddess Durga (ChāmunDēshwari). The regional tradition states that The Buffalo demon Mahishāsura had terrified the local population. It is believed that Goddess ChāmunDēshwari killed Mahishāsura on top of the ChāmunDi Hills. The spot was constructed as the ChāmunDēshwari Temple in Mysuru, and an event is annually celebrated at Navaratri and Mysuru Dasara. The British Era in India saw the name of “Mahishooru” change to “Mysore” and later Kannadized into “Mysooru”

The temple of the city’s guardian deity, ChāmunDēshwari, has a giant statue of Mahishāsura on the hill facing the city. The earliest mention of Mysore in recorded history may be traced to 245 B.C., i.e., to the period of Ashoka when on the conclusion of the third Buddhist convocation, a team was dispatched to Mahisha Mandala.

Uttanahalli is about five kilometres from Mysore on the highway to Nanjanagūd. The Jwālamukhi Tripurasundari temple is situated on a hillock in the middle of the village square. The temple and the village are located on the base of the ChāmunDi Hill in Mysore, 3 kms from the ChāmunDēshwari temple atop the hill.

Colloquially known as Māramma/Uttanahalli Māramma, Jwālamukhi Tripurasundari is believed to be ChāmunDēshwari.’s sister.  

When ChāmunDi was fighting with Mahishāsura, also called as Rakta Beejāsura, Asuras sprout wherever his blood touched the ground. During that time, Uttanahalli Māramma is born out of the sweat of ChāmunDi. She asks ChāmunDi to concentrate on fighting the Asuras and assures her that she will ensure not a drop of Asura blood will fall into the ground. She draws out her long tongue like a carpet and drinks all the blood that falls out of Mahisha thereby successfully ensuring that ChāmunDi can kill Mahisha.

Place

This story takes place from ChāmunDi hills to Nanjanagūd including Uttanahalli and MuLLooru/MuLLūr (~co-ordinates 12°08’05.3″N 76°43’07.0″E) on the riverbank of Kabini close to today’s HoralavaaDi village. Note that in oral tradition of the song, MuLLooru is sometimes rendered as maLLooru/MaraLooru, which is not apt. As the crow flies, as per map of Mysore in Google, the distance between ChāmunDi temple atop (1)and Uttanahalli temple (2) is ~2.5 kms in the South-East direction. Similar distance between Uttanahalli temple (2) and MuLLooru (3) is ~17 kms due south. Nanjanagūd Nanjundeshwara temple (4) is 3.3 kms, almost east of MuLLooru (3). The meaning of Uttana is a place or region which is neither too far nor too close; (literally, in between those can be referred to with ‘there’ and ‘here’). Uttanahalli is a place in between Nanjanagūd – there and ChāmunDi hill – here

Utnalli and surrounding areas google map

Dates

This song will stay for eternity, as long as the current culture in Chamundi hills and Nanjanagūd is alive. The song is valid just three four months after the killing of Mahishāsura.

Analysis

The intense and bloody battle between Mahishāsura, ChāmunDi and Māramma comes to an end with the killing of Mahishāsura. The credit of this victory duly goes to ChāmunDi and Māramma.

ChāmunDēshwari is bestowed with accolades. She is a recognized consort of Mahādēva NanjunDēshwara. She becomes the patron deity for the rulers of Mysore. Māramma was also the recipient of animal sacrifices during the nine-day Navarātri celebrations in olden days, a practice which is now discontinued. However, Dasara (Dashahara) festivities are celebrated with pomp and grandeur every year around October even today with ChāmunDēshwari and Mysore being the spotlight but celebrated all over Karnataka. Māri saaru Uttanahalli Fair, popularly known as the Sreejwālamukhi Tripura Sundari (Uttanahalli Māramma) Fair, is held every time around February even today.

It looks like it is after all a happy ending. But…

ChāmunDēshwari, the hideous and savage form of Parvati cannot be a role model Goddess forever. The values and meanings that Parvati is revered for – nature, soft, provider of life, mother cannot be replaced by that of ChāmunDēshwari – unnatural, fearful, bloodthirsty, fighter. It is necessary that a normalcy is restored. In other words, Shiva cannot stay with ChāmunDi forever. He has to go back to his Ardha-Naareeshwara form where he is one with Parvati. He must return to Nanjanagūd. It is the right thing for him, and he has no other choice.

Yes, it is overall a right thing to do. But is it how you treat the saviour ChāmunDēshwari? Without her help, the whole balance of good and bad would have shifted had Mahisha lived. In fact, Mahisha offers ChāmunDēshwari to marry him and lead a good life in the heaven captured by Mahisha. She rejects his offer and instead kills him with her valor. So, she has every right to seek better status for her, better than the lonely top of the hill adoration by one-and-all.

The song begins with this anguish expressed by ChāmunDēshwari to her younger sister Māramma. She cannot have food/water, she cannot sleep. She cannot accept the logic of Shiva going back to his old-love Parvati, whom she describes as aged and gray-haired.

Unable to bear the grief, ChāmunDēshwari becomes emotional and curses Shiva in all possible ways. She heaps misfortunes on him. She even wishes that he suffers and dies horrendously for not returning to her.

Then she consoles herself, calms down and implores Māramma to visit Nanjanagūd and ask Nanjundeshwara to return to ChāmunDi. Notice that she could be too proud, or ashamed but for whatever reasons, she does not want to visit Nanjanagūd herself.

Māramma listens to ChāmunDi and doesn’t bat an eyelid before she decides to leap on her chariot to visit Nanjanagūd and fulfilling the task assigned by ChāmunDi.

There are certain subtle points to be noted here. Neither ChāmunDi nor Māramma make it an open issue in front of everyone. The story itself takes place in the middle of a dark night, without a soul stirring. Did they assume that society would not support their argument? Or did they want the matters related to the holiest Gods are best to be kept as secrets? An emphasis on the dark night in the song shows the desperate state, the helplessness in the abandonment of ChāmunDi and the need to keep this a clandestine and private matter.

In that middle of the night “where even water and stone melt”, Māramma reaches MuLLooru on the riverbank of Kabini. Perhaps, the river is a natural separation which cannot be crossed by the chariot of Māramma. Or maybe she presented her request before Shambulingeshwar at MuLLooru (Shambulingeshwar temple at MuLLooru can be seen even today). Or perhaps she does not want to enter Nanjanagūd for some other reason, maybe etiquette or protocol. Whatever the reason, Māramma reaches MuLLooru and there she appeals to Shiva in the best possible fashion.

Māramma is aware that shambhoo gets impressed and influenced by good conversation. Shiva is not unreasonable and has provided boons to his devotees who approached him in the right way. Therefore, she just fondly urges him to speak. She credits him with being a lovable king, asks him to show his handsome face, just speak because it sounds good and gently asks him to come out to the street and beautify that street through his presence.

Even after this skillfully coordinated appeal to Shiva, Māramma realizes that Shiva is not going to heed to her appeals.

Sadly, still addressing him as Swamy honorably and calling him by his pet names Chandrasēkara and NanjunDēsha, she tells him with disappointment, with re-iteration, that he does not have a place for his wife ChāmunDēshwari in his heart. She does not curse like ChāmunDi , notice this difference between the propositions of the two.

Thus, the most beautiful (her beauty is compared with the ever-beautiful Apsara Rambhe) Uttanahalli Māramma, on that midnight calls and beseeches NanjunDēshwara unsuccessfully and returns back (apparently back to ChāmunDēshwari). Did Māramma behave here with impunity, or with dignity, majesty and rationality? All these elements are skillfully included in the song to reflect Maramma’s maturity.

The story ends here with the agony of ChāmunDēshwari not being addressed. There is no clarity on NanjunDēsha’s return to ChāmunDēshwari, but enough hints are provided. It is left to the listeners to create their own opinion about the complete episode with no judgment passed in the folksong.

ಯೂಟ್ಯೂಬ್‌ನಲ್ಲಿ ಹಾಡನ್ನು ಆಲಿಸಿ, ವೀಕ್ಷಿಸಿ

Listen, View on YouTube

Additional information

5 thoughts on “ಉತ್ನಳ್ಳಿ ಮಾರಮ್ಮನ ಜನಪದ ಹಾಡು/Utnalli Māramma’s folksong

  1. I’m no longer sure where you are getting your info, but
    good topic. I needs to spend some time finding out much more or understanding more.

    Thank you for great info I used to be searching for this information for my mission.

  2. hi!,I like your writing very much! proportion we communicate more
    approximately your article on AOL? I need a specialist in this space to unravel my problem.

    May be that is you! Looking ahead to peer you.

  3. whoah this blog is great i really like reading your articles.

    Stay up the good work! You recognize, lots of persons are searching around for this
    info, you could help them greatly.

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.