ಕಾಣದ ಕಡಲಿಗೆ ಹಂಬಲಿಸಿದೆ ಮನ
ಕನ್ನಡ ಭಾವಗೀತೆ
ರಚನೆ – ಡಾ॥ ಜಿ. ಎಸ್. ಶಿವರುದ್ರಪ್ಪ
ನನ್ನ ವರಸೆ
Kaanada Kadalige Hambaliside Mana
Kannada Bhavageethe
Penned By – Dr. G.S.Shivarudrappa
MY SWIRL
ಮೂಲ – ORIGINAL ಡಾ॥ ಜಿ. ಎಸ್. ಶಿವರುದ್ರಪ್ಪ ಕಾಣದ ಕಡಲಿಗೆ ಹಂಬಲಿಸಿದೆ ಮನ ಕಾಣದ ಕಡಲಿಗೆ.. ಹಂಬಲಿಸಿದೆ ಮನ.. ಕಾಣ ಬಲ್ಲೆನೆ ಒಂದು ದಿನಾ ಕಡಲನು ಕೂಡ ಬಲ್ಲೆನೆ ಒಂದು ದಿನಾ ಕಾಣಬಲ್ಲೆನೆ ಒಂದು ದಿನಾ.. ಕಡಲನು.. ಕೂಡಬಲ್ಲೆನೆ ಒಂದು ದಿನಾ ಕನ್ನಡ ಕಡಲಿಗೆ.. ಹಂಬಲಿಸಿದೆ ಮನ.. ಕಾಣದ ಕಡಲಿನ ಮೊರೆತದ ಜೋಗುಳ ಒಳಗಿವಿಗಿಂದು ಕೇಳುತಿದೆ ನನ್ನ ಕಲ್ಪನೆಯು ತನ್ನ ಕಡಲನೆ ಚಿತ್ರಿಸಿ ಚಿಂತಿಸಿ ಸುಯ್ಯುತಿದೆ ಕಾಣದ ಕಡಲಿನ ಮೋರೆತದ ಜೋಗುಳ ಒಳಗಿವಿಗೆಂದು ಕೇಳುತಿದೆ ನನ್ನ ಕಲ್ಪನೆಯು ತನ್ನ ಕಡಲನೆ ಚಿತ್ರಿಸಿ ಚಿಂತಿಸಿ ಸುಯ್ಯುತಿದೆ ಎಲ್ಲಿರುವುದೋ ಅದು.. ಎಂಥಿರುವುದೋ ಅದು.. ನೋಡ ಬಲ್ಲೆನೆ ಒಂದು ದಿನಾ ಕಡಲನು ಕೂಡ ಬಲ್ಲೆನೆ ಒಂದು ದಿನಾ ಕಾಣದ ಕಡಲಿಗೆ.. ಹಂಬಲಿಸಿದೆ ಮನ.. ಸಾವಿರ ಹೊಳೆಗಳು ತುಂಬಿ ಹರಿದರು ಒಂದೇ ಸಮನಾಗಿಹುದಂತೆ ಸುನೀಲ ವಿಸ್ತಾರ ತರಂಗ ಶೋಭಿತಾ ಗಂಭೀರಾಂಭೂಧಿ ತಾನಂತೇ ಸಾವಿರ ಹೊಳೆಗಳು ತುಂಬಿ ಹರಿದರು ಒಂದೇ ಸಮನಾಗಿಹುದಂತೆ ಸುನೀಲ ವಿಸ್ತಾರ ತರಂಗ ಶೋಭಿತಾ ಗಂಭೀರಾಂಭುಧಿ ತಾನಂತೇ.. ಮುನ್ನೂರಂತೆ… ಅಪರಾವಂತೆ… ಕಾಣ ಬಲ್ಲೆನೆ ಒಂದು ದಿನಾ ಅದರೊಲು ಕರಗಲಾರೆನೆ ಒಂದು ದಿನ ಕಾಣದ ಕಡಲಿಗೆ ಹಂಬಲಿಸಿದೆ ಮನ ಜಟಿಲ ಕಾನನದ ಕುಟಿಲ ಪಥಗಳಲಿ ಹರಿವ ತೋರೆಯು ನಾನು.. ಎಂದಿಗಾದರು ಕಾಣದ ಕಡಲಿಗೆ ಸೇರ ಬಲ್ಲೆನೆನು ಜಟಿಲ ಕಾನನದ ಕುಟಿಲ ಪಥಗಳಲಿ ಹರಿವ ತೋರೆಯು ನಾನು.. ಎಂದಿಗಾದರು ಕಾಣದ ಕಡಲಿಗೆ ಸೇರಬಲ್ಲೆನೆನು ಸೇರಬಹುದೇ ನಾನು.. ಕಡಲ ನೀಲಿಯೊಳು ಕರಗಬಹುದೆ ನಾನು.. ಕರಗಬಹುದೆ ನಾನು.. ಕರಗಬಹುದೆ ನಾನು.. | ನನ್ನ ವರಸೆ – MY SWIRL ಡಾ॥ ಶಿವರುದ್ರಪ್ಪನವರ ಕ್ಷಮೆ ಕೋರಿ ಕಾಣದ ಕಡಲಿಗೆ … ಹಂಬಲಿಸದಿರೇ ಮನ. ಕಾಣದ ಕಡಲಿಗೆ ಹಂಬಲಿಸದಿರೇ ಮನ… ಕಾಣ ಬೇಕೆ ನಾ ಒಂದು ದಿನಾ ಕಡಲನು ಕೂಡ ಬೇಕೆ ನಾ ಒಂದು ದಿನಾ ಕಾಣ ಬೇಕೆ ನಾ ಒಂದು ದಿನಾ ಕಡಲನು.. ಕೂಡ ಬೇಕೆ ನಾ ಒಂದು ದಿನಾ ಕಾಣದ ಕಡಲಿಗೆ ಹಂಬಲಿಸದಿರೇ ಮನ… ಕಾಣದ ಕಡಲಿನ ಮೊರೆತದ ಘರ್ಷಣೆ ಒಳಗಿವಿಗಿಂದು ಕೇಳುತಿದೆ ನನ್ನ ಕಲ್ಪನೆಯು ತನ್ನ ಕಡಲನೆ ತೆರೆತೆರೆ ಚಿತ್ರಿಸಿ ತಡವುತಿದೆ ಕಾಣದ ಕಡಲಿನ ಮೊರೆತದ ಲಹರಿ ಒಳಗಿವಿಗಿಂದು ಕೇಳುತಿದೆ ನನ್ನ ಕಲ್ಪನೆಯು ತನ್ನ ಕಡಲನೆ ತೆರೆತೆರೆ ಚಿತ್ರಿಸಿ ತಡವುತಿದೆ ಎಲ್ಲಿರುವುದೋ ಅದು ಎಂತಿರುವುದೋ ಅದು ಮರೆತುಬಿಡೇ ಎನ್ನ ಮನ ಕಡಲನು ಬಯಸದಿರೇ ಎನ್ನ ಮನ ಕಾಣದ ಕಡಲಿಗೆ ಹಂಬಲಿಸದಿರೇ ಮನ. ಸಾವಿರ ಹೊಳೆಗಳು ಸರ್ವದಾ ಹರಿದೂ ಚೈತನ್ಯ ಚಿಲುಮೆ ಸೃಷ್ಟಿಸಿತಂತೆ ಸುನೀಲ ವಿಸ್ತಾರ ತರಂಗ ಶೋಭಿತಾ ಗಂಭೀರಾಂಬುಧಿ ಸಾಗರವಂತೆ ಸಾವಿರ ಹೊಳೆಗಳು ಸರ್ವದಾ ಹರಿದೂ ಚೈತನ್ಯ ಚಿಲುಮೆ ಸೃಷ್ಟಿಸಿತಂತೆ ಸುನೀಲ ವಿಸ್ತಾರ ತರಂಗ ಶೋಭಿತಾ ಗಂಭೀರಾಂಬುಧಿ ಸಾಗರವಂತೆ… ಮುನ್ನೀರಂತೆ… ಅಪಾರವಂತೆ… ಬಯಸದಿರೇ ಎನ್ನ ಮನ ಅದರೊಳು ಮರೆಯಾಗಬೇಡ ಸುಮ್ಮನ ಕಾಣದ ಕಡಲಿಗೆ ಹಂಬಲಿಸದಿರೇ ಮನ. ಲಲಿತ ಕಾನನದ ಲತಾಂಗಿ ಪಥಗಳಲಿ ಮಿನುಗೋ ಹೊಳೆಯು ನಾನು ಏನೇ ಆದರೂ ಕಾಣದ ಕಡಲನು ಸೇರಲೊಲ್ಲೆನಾನು ಲಲಿತ ಕಾನನದ ಲತಾಂಗಿ ಪಥಗಳಲಿ ಮಿನುಗೋ ಹೊಳೆಯು ನಾನು.. ಎಂತೇ ಆದರೂ ಕಾಣದ ಕಡಲನು ಸೇರಲೊಲ್ಲೆನಾನು. ಸೇರಲೇಕೆ ನಾನು.. ಕಡಲ ಗರ್ಭದಲಿ ಕನರಲೊಲ್ಲೆ ನಾನು.. ಕನರಲೊಲ್ಲೆ ನಾನು.. ಕರಗಲೊಲ್ಲೆ ನಾನು.. |